Sadhguru in Muscat
 - ಲೈವ್ ಒಳಗೆ 3ದಿನ : 9ಗಂಟೆ : 50ನಿಮಿಷ
ಮಣ್ಣುಕಾರ್ಯಕ್ರಮಗಳುಬೆಂಬಲಿಗರುಇದರ ಕುರಿತು
ಈಗಲೇ ಕಣಕ್ಕೆ
Background

ಕಾನ್ಷಿಯಸ್ ಪ್ಲಾನೆಟ್-ಪ್ರಜ್ಞಾವಂತ ಪ್ರಪಂಚ

ಕಾನ್ಷಿಯಸ್ ಪ್ಲಾನೆಟ್-ಪ್ರಜ್ಞಾವಂತ ಪ್ರಪಂಚ ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಮತ್ತು ನಮ್ಮ ಸಮಾಜದ ಬಹುವಿಧದ ಚಟುವಟಿಕೆಗಳು ಪ್ರಜ್ಞಾಪೂರ್ವಕವಾಗಿ ನಡೆಯುವಂತಹ ಒಂದು ಒಳಗೂಡಿಸಿಕೊಳ್ಳುವಿಕೆಯ ಭಾವವನ್ನು ತರುವ ಪ್ರಯತ್ನವಾಗಿದೆ. ಇದೊಂದು ನಮ್ಮ ಪರಿಸರ ಮತ್ತು ಎಲ್ಲಾ ಜೀವಿಗಳಿಗೆ ಬೆಂಬಲವಾಗಿ ಮಾನವ ಚಟುವಟಿಕೆಯನ್ನು ಜೋಡಿಸುವ ಪ್ರಯತ್ನ. ಇದರ ಮುಖ್ಯ ಧ್ಯೇಯವು ಹೆಚ್ಚಿನ ಸಂಖ್ಯೆಯ ಮಾನವರು ಪ್ರಜ್ಞಾಪೂರ್ವಕವಾಗಿ ಕಾರ್ಯನಿರ್ವಹಿಸುವ, ಸರ್ಕಾರಗಳು ಪ್ರಜ್ಞಾಪೂರ್ವಕವಾಗಿ ಚುನಾಯಿತರಾಗುವ ಮತ್ತು ಸಮಾಜದಲ್ಲಿ ಪರಿಸರ ಸಮಸ್ಯೆಗಳು ಮುಖ್ಯ ಚುನಾವಣಾ ವಿಷಯಗಳಾಗುವಂತಹ ಪ್ರಪಂಚವನ್ನು ರಚಿಸುವತ್ತ ಮುಡಿಪಾಗಿದೆ.

ಇನ್ನಷ್ಟು ಓದಿರಿ

ಮಣ್ಣು ಉಳಿಸಿ ಅಭಿಯಾನವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ:

1

ಮಣ್ಣಿನ ನಾಶದ ಕಡೆಗೆ ಪ್ರಪಂಚದ ಗಮನವನ್ನು ಸೆಳೆಯುವುದು.

2

ಮಣ್ಣನ್ನು ರಕ್ಷಿಸಲು, ಪೋಷಿಸಲು ಮತ್ತು ಉಳಿಸಿಕೊಳ್ಳಲು ನೀತಿನಿಯಮಾವಳಿಗಳು ಮತ್ತು ಮರುನಿರ್ದೇಶನಗಳನ್ನು ಬೆಂಬಲಿಸಲು ಸುಮಾರು 3.5 ಶತಕೋಟಿ ಜನರನ್ನು (ಪ್ರಪಂಚದ ಒಟ್ಟು 5.26 ಶತಕೋಟಿ ಮತದಾರರ 60%) ಪ್ರೇರೇಪಿಸುವುದು.

3

ಮಣ್ಣಿನ ಸಾವಯವ ಅಂಶವನ್ನು ಕನಿಷ್ಠ 3 ರಿಂದ 6% ಗೆ ಏರಿಸಿ ಅದನ್ನು ಹಾಗೆಯೇ ಉಳಿಸಿಕೊಂಡು ಹೋಗುವೆಡೆಗೆ, ರಾಷ್ಟ್ರೀಯ ನೀತಿನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತರಲು 193 ರಾಷ್ಟ್ರಗಳನ್ನು ಪ್ರೇರೇಪಿಸುತ್ತದೆ.

Soil Revitalization - Global Policy Draft & Solutions Handbook

Read
policy
background
Sadhguru

ಸದ್ಗುರು

ಯೋಗಿ, ದಾರ್ಶನಿಕ ಮತ್ತು ಮಾನವತಾವಾದಿಯಾದ ಸದ್ಗುರುಗಳು ನಮ್ಮ ಕಾಲದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಅಗಾಧ ಸಾಮರ್ಥ್ಯದ ಜ್ಞಾನೋದಯ ಹೊಂದಿದ ಗುರುಗಳಾದ ಅವರು, ಕೆಲವು ವೈವಿಧ್ಯಮಯ ಹಾಗೂ ವ್ಯಾಪಕವಾದ ಮಹತ್ತರ ಸವಾಲುಗಳನ್ನು ಕೈಗೊಂಡಿದ್ದಾರೆ.

ಆದಾಗ್ಯೂ, ಅವರ ಎಲ್ಲಾ ಪ್ರಯತ್ನಗಳು ಯಾವಾಗಲೂ ಒಂದೇ ಗುರಿಯತ್ತ ಮುಡಿಪಾಗಿವೆ - ಮಾನವ ಪ್ರಜ್ಞೆಯನ್ನು ಉನ್ನತಿಗೇರಿಸುವುದು. ಕಳೆದ ನಾಲ್ಕು ದಶಕಗಳಲ್ಲಿ, ಸದ್ಗುರುಗಳು ಈಶಾ ಫೌಂಡೇಶನ್ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಯೋಗಕ್ಷೇಮದ ತಂತ್ರಜ್ಞಾನಗಳನ್ನು ಒದಗಿಸಿದ್ದಾರೆ. ಇದನ್ನು ಪ್ರಪಂಚದಾದ್ಯಂತ 300 ನಗರಗಳಲ್ಲಿ 1.6 ಕೋಟಿ ಸ್ವಯಂಸೇವಕರು ಬೆಂಬಲಿಸುತ್ತಿದ್ದಾರೆ. ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಪದ್ಮವಿಭೂಷಣ ಮತ್ತು 2010 ರಲ್ಲಿ ಭಾರತದ ಅತ್ಯುನ್ನತ ಪರಿಸರ ಪ್ರಶಸ್ತಿಯಾದ ಇಂದಿರಾಗಾಂಧಿ ಪರ್ಯಾಯ ಪುರಸ್ಕಾರ್ ಸೇರಿದಂತೆ, ಸದ್ಗುರುಗಳಿಗೆ ಮೂರು ರಾಷ್ಟ್ರಪತಿ ಪ್ರಶಸ್ತಿಗಳನ್ನು ನೀಡಲಾಗಿದೆ.

ಇನ್ನಷ್ಟು ಓದಿರಿ

ಮಣ್ಣು ಉಳಿಸಿ: 24 ವರ್ಷಗಳ ಹಿಂದೆ ಆರಂಭವಾದ ಅಭಿಯಾನ

ಮೂರು ದಶಕಗಳಿಂದ ಸದ್ಗುರುಗಳು ನಿರಂತರವಾಗಿ ಮಣ್ಣಿನ ಮಹತ್ವವನ್ನು ಮತ್ತು ಮಣ್ಣಿನ ಅಳಿವಿನ ಆತಂಕಕಾರಿ ವಿಪತ್ತನ್ನು ಗಮನಕ್ಕೆ ತರುತ್ತಿದ್ದಾರೆ. ಅವರು ಹಲವಾರು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೇ ಪ್ರತಿಪಾದಿಸುವುದು ಏನೆಂದರೆ: "ಮಣ್ಣು ನಮ್ಮ ಜೀವನ, ನಮ್ಮ ದೇಹ. ನಾವು ಮಣ್ಣನ್ನು ತ್ಯಜಿಸಿದರೆ, ಅನೇಕ ರೀತಿಯಲ್ಲಿ, ಭೂಮಿಯನ್ನು ತ್ಯಜಿಸಿದಂತೆ."

ಮಣ್ಣನ್ನು ಉಳಿಸುವವರು ಯಾರು?

Tree

1990 ರ ದಶಕ. ತಮಿಳುನಾಡಿನ ಗ್ರಾಮೀಣ ಪ್ರದೇಶ. ಜನರ ಗುಂಪೊಂದು ಹೇರಳವಾದ ಎಲೆಗಳ ಮರದ ನೆರಳಿನಲ್ಲಿ ಕಣ್ಣು ಮುಚ್ಚಿ ಕುಳಿತಿತ್ತು. ಸ್ವಲ್ಪ ಸಮಯದ ಹಿಂದೆ, ಅವರು ದಕ್ಷಿಣ ಭಾರತದ ಸೂರ್ಯನ ಘೋರ ಪರಿಣಾಮಗಳನ್ನು ಅನುಭವಿಸುತ್ತಾ, ಬಿಸಿಲಿಗೆ ಬಾಡುತ್ತಾ ಮತ್ತು ಬೆವರುತ್ತಾ, ತೆರೆದ ಸ್ಥಳದಲ್ಲಿ ಕುಳಿತುಕೊಂಡಿದ್ದರು. ಈಗ, ರಕ್ಷಣೆ ನೀಡುವ ಹಸಿರ ನೆರಳಿನಲ್ಲಿ, ತಂಪಾದ ಗಾಳಿ ಬೀಸುತ್ತಿರುವಾಗ ಅವರು ದೊಡ್ಡ ಮರದ ಸತ್ವ ಮತ್ತು ಅನುಗ್ರಹವನ್ನು ಅರಿತುಕೊಂಡರು.

ಸದ್ಗುರುಗಳು ಅವರನ್ನು ಒಂದು ಆಂತರಿಕ ಪ್ರಕ್ರಿಯೆಯ ಮೂಲಕ ಮುನ್ನಡೆಸಿದರು, ಅಲ್ಲಿ ಅವರು ಮರದೊಂದಿಗೆ ಉಸಿರಾಟದ ವಿನಿಮಯವನ್ನು ಅನುಭವಿಸಿದರು, ಅವರು ಹೊರಬಿಟ್ಟ ಇಂಗಾಲವನ್ನು ಮರಗಳು ಎಳೆದುಕೊಂಡವು, ಮತ್ತು ಮರಗಳು ಹೊರಬಿಟ್ಟ ಆಮ್ಲಜನಕವನ್ನು ಅವರು ಎಳೆದುಕೊಂಡರು. ಅವರ ಉಸಿರಾಟದ ಉಪಕರಣದ ಅರ್ಧದಷ್ಟು ಭಾಗ ಅಲ್ಲಿ ನೇತಾಡುತ್ತಿರುವುದನ್ನು ಅವರು ಸ್ಪಷ್ಟವಾಗಿ ನೋಡುವ ಅನುಭವದ ಪ್ರಕ್ರಿಯೆ. ಸದ್ಗುರುಗಳು "ಅತ್ಯಂತ ಕಷ್ಟಕರವಾದ ಜಾಗ ಎಂದು ಕರೆಯುವ - ಜನರ ಮನಸ್ಸಿನಲ್ಲಿ - ಮರಗಳನ್ನು ನೆಡಲು ಪ್ರಾರಂಭಿಸಿದ ಆರಂಭಿಕ ದಿನಗಳು". ಎಲ್ಲ ಜೀವಿಗಳೊಂದಿಗಿನ ಏಕತೆಯ ಈ ಮೊದಲ ಅನುಭವ ನಮ್ಮ ಭೂಮಿಯನ್ನು ಪುನಃಚ್ಚೇತನಗೊಳಿಸಲು ಈ ಅಭಿಯಾನ ಮೊದಲು ಪ್ರಾರಂಭಿಸಿದ ಉತ್ಸಾಹಿ ಸ್ವಯಂಸೇವಕರನ್ನು ಉತ್ತೇಜಿಸಿತು.

1990 ರ ದಶಕದಲ್ಲಿ ವೆಲ್ಲಿಯಂಗಿರಿ ಬೆಟ್ಟಗಳನ್ನು ಹಸಿರಾಗಿಸುವ ಗುರಿಯನ್ನು ಹೊಂದಿದ್ದ ಪರಿಸರ ಅಭಿಯಾನವಾದ ’ವನಶ್ರೀ’ ರೂಪದಲ್ಲಿ ಕೆಲವು ಸಾವಿರ ಸ್ವಯಂಸೇವಕರೊಂದಿಗೆ ಪ್ರಾರಂಭವಾಗಿ, ಶೀಘ್ರದಲ್ಲೇ ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್ ಆಗಿ ಬೆಳೆಯಿತು. ಇದು 2000 ರ ಮೊದಲ ದಶಕದಲ್ಲಿ ತಮಿಳುನಾಡಿನಾದ್ಯಂತ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿದ ದೊಡ್ಡ ಅಭಿಯಾನವಾಗಿತ್ತು. 2017 ರಲ್ಲಿ, ಸದ್ಗುರುಗಳು ವಿಸ್ಮಯಕಾರಿಯಾದ ನದಿಗಳನ್ನು ರಕ್ಷಿಸಿ ರ‍್ಯಾಲಿಯನ್ನು ಮುನ್ನಡೆಸಿದಾಗ, ಅದು 162 ಮಿಲಿಯನ್ ಭಾರತೀಯರ ಬೆಂಬಲದೊಂದಿಗೆ ಭೂಮಿಯ ಮೇಲಿನ ಅತಿದೊಡ್ಡ ಪರಿಸರ ಅಭಿಯಾನವಾಗಿ ಹೊರಹೊಮ್ಮಿತು. ಇದು ಅತ್ಯಂತ ಪ್ರಾಯೋಗಿಕ ಮತ್ತು ಪರಿಕಲ್ಪನೆಗೆ ಸಾಕ್ಷಿಯಾದ ಕಾವೇರಿ ಕೂಗು ಯೋಜನೆಯೊಂದಿಗೆ ತೀವ್ರವಾದ ನೆಲ ಮಟ್ಟದ ಚಟುವಟಿಕೆಗೆ ಕಾರಣವಾಯಿತು. ಈಗ, ಇದು ಪ್ರಜ್ಞಾವಂತ ಪ್ರಪಂಚವನ್ನು ರಚಿಸಲು ಮತ್ತು ಮಣ್ಣನ್ನು ಉಳಿಸಲು ಅಭೂತಪೂರ್ವ ಅಭಿಯಾನವಾದ ’ಮಣ್ಣು ಉಳಿಸಿ’ ರೂಪದಲ್ಲಿ ಶತಕೋಟಿ ಜಾಗತಿಕ ನಾಗರಿಕರನ್ನು ಒಳಗೊಳ್ಳುತ್ತದೆ. ಭೂಮಿಯ ಮೇಲೆ 3.5 ಶತಕೋಟಿ ಜನರನ್ನು ತಲುಪುವ ಸದ್ಗುರುಗಳ ಈ ಉಪಕ್ರಮ ಮೂರು ದಶಕಗಳ ಕೆಲಸ ಮತ್ತು ವಿಕಾಸದ ಫಲಿತಾಂಶವಾಗಿದೆ.

ಈ ಅಭಿಯಾನದಿಂದ ಸ್ಫೂರ್ತಿ ಪಡೆದ ಅಪಾರ ಜನರ ಸಂಖ್ಯೆಯು ಈ ಅಭಿಯಾನದ ವಿಕಸನದಲ್ಲಿನ ನಿರ್ಣಾಯಕ ಅಂಶವಾಗಿದೆ. ಇದಲ್ಲದೆ, ಅದರ ಬೆಳೆಯುತ್ತಿರುವ ಪ್ರಭಾವದ ಮಟ್ಟವು ಅಷ್ಟೇ ಮುಖ್ಯವಾಗಿದೆ. ಸ್ಥಳೀಯ ಸಮುದಾಯಗಳು, ಸಂಸ್ಥೆಗಳು, ರೈತರು, ಶಾಲೆಗಳು ಮತ್ತು ರಾಜ್ಯ ಸರ್ಕಾರಗಳಿಂದ ಹಿಡಿದು, ಭಾರತದಲ್ಲಿ ರಾಷ್ಟ್ರೀಯ ನದಿ ನೀತಿಯನ್ನು ರೂಪಿಸಲು ಸಹಾಯ ಮಾಡುವವರೆಗೆ ಮತ್ತು ಈಗ ಪರಿಸರಕ್ಕೆ ಸಂಬಂಧಿಸಿದ ಕೆಲವು ಅಂತರರಾಷ್ಟ್ರೀಯ ಏಜೆನ್ಸಿಗಳು, ವಿಶ್ವ ನಾಯಕರು ಮತ್ತು ಸರ್ಕಾರಗಳೊಂದಿಗೆ ಕೆಲಸ ಮಾಡುವವರೆಗೆ - ಆಂದೋಲನವು ಕಳೆದ ಮೂರು ದಶಕಗಳಲ್ಲಿ ಹಠಾತ್ ಪ್ರಗತಿಯನ್ನು ಮಾಡುತ್ತಿದೆ.

ಮಣ್ಣು ಉಳಿಸಿ ಅಭಿಯಾನದ ಪ್ರಮುಖ ಪ್ರಯತ್ನವೆಂದರೆ ಇಡೀ ಪ್ರಜಾಪ್ರಭುತ್ವ ಪ್ರಪಂಚದ ನಾಗರಿಕರನ್ನು ಒಂದೇ ಧ್ವನಿಯಲ್ಲಿ ಭೂಮಿಯ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಮಾತನಾಡಲು ಮತ್ತು ಅದನ್ನು ಕಾಪಾಡುವ ಬಗ್ಗೆ ತಮ್ಮ ಬದ್ಧತೆಯನ್ನು ದೃಢೀಕರಿಸಲು ಒಟ್ಟುಗೂಡಿಸುವುದು. ಪರಿಸರದ ಸಮಸ್ಯೆಗಳು ಚುನಾವಣಾ ವಿಷಯಗಳಾದಾಗ, ಮಣ್ಣಿನ ಸಂರಕ್ಷಣೆಗಾಗಿ ದೀರ್ಘಕಾಲೀನ ನೀತಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಜನರ ಬೆಂಬಲವು ಸರ್ಕಾರಗಳಿಗೆ ಸಿಕ್ಕಾಗ, ವ್ಯಾಪಾರಗಳು, ಸಂಸ್ಥೆಗಳು, ವ್ಯಕ್ತಿಗಳು ಮತ್ತು ಸರ್ಕಾರಗಳು ಮಣ್ಣಿನ ಆರೋಗ್ಯವನ್ನು ಪ್ರಾಥಮಿಕ ಆದ್ಯತೆಯಾಗಿ ಮಾಡಿದಾಗ - ಈ ನಿರಂತರ ಪ್ರಯತ್ನವು ಫಲ ನೀಡುತ್ತದೆ.

ಇದು ಗ್ರೀನ್ ಹೆಡ್ಸ್ ನಿಂದ ಶುರುವಾಗಿ, ಗ್ರೀನ್ ಹ್ಯಾಂಡ್ಸ್ ನಿಂದ ಮುಂದುವರೆದು, ಗ್ರೀನ್ ಹಾರ್ಟ್ಸ್ ವರೆಗಿನ ಪ್ರಯಾಣವಾಗಿದೆ. ಹಾಗಾದರೆ ಮಣ್ಣು ಉಳಿಸುವವರು ಯಾರು? ನಮ್ಮಲ್ಲಿನ ಪ್ರತಿಯೊಬ್ಬರೂ.

ಇದನ್ನು ಸಾಧ್ಯವಾಗಿಸೋಣ!

ಬನ್ನಿ, ಇದನ್ನು ಸಾಧ್ಯವಾಗಿಸೋಣ!

ಈಗಲೇ ಕಣಕ್ಕೆ
footerLogo

ಮಣ್ಣು

© 2022 ಕಾನ್ಷಿಯಸ್ ಪ್ಲ್ಯಾನೆಟ್ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ

ಗೌಪ್ಯತಾ ನೀತಿ.

ನಿಯಮಗಳು ಮತ್ತು ಷರತ್ತುಗಳು.